ಜೆಇಇ ಮೇನ್ಸ್ ಪರೀಕ್ಷೆ:

10th February, 2026
NEWS COVERAGES #JEE

ಧಾರವಾಡ: ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಜೆ ಮುಖ್ಯ ಪರೀಕ್ಷೆಯ ಪ್ರಥಮ ಆವೃತ್ತಿಯಲ್ಲಿ ಅರ್ಜುನ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡುವುದರ ಮೂಲಕ ಧಾರವಾಡ ಶಹರಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ

 

ಸಾಧನೆಗೈದ ವಿದ್ಯಾರ್ಥಿಗಳು ಕೇದಾರ್ ಜೋಶಿ ( 99.84), ಅನ್ಮೋಲ್ ಪ್ರಭು (99.75), ಅನೀಶ್ ನಾಯಕ್ (99.56), ದರ್ಶನ ಭಟ್( 98.97),ದ್ರುವಂತ್ (98.52),ವಿನೀತ್ ಚವಾಣ್ (98.05),ಆಕಾಶ್ ರಾಠೋಡ್ ( 97.61),ಪ್ರೀತಮ್ ಚವಾಣ್ (97.46),ಕಾರ್ತಿಕ್ ಭಜಂತ್ರಿ (96.38), ರಜತ್ ಭಟ್ (95.36),ಸೃಜನ ಪಾಟೀಲ್ ( 94.62), ಪ್ರಣತಿ ಮೆಣಸೂಮನೆ (94.37), ಸಿಂಚನಾ ಭಟ್ (93.92), ಭಾರ್ಗವ್ ಹೆಬ್ಬಾರ್(93.62), ಪ್ರಗತಿ ನರೋಣಿ ( 93.40),ಅನನ್ಯ ಪೂಜಾರ್ ( 93.11), ಪೂರ್ವಿ ಹೆಗ್ಡೆ (92.04), ಸುಶಾಂತ್ ನಾಯಕ್ (91.71), ಪ್ರೀತಮ್ ಯು ವೈ( 91.70), ಉದಿತ್ (90.95), ಸಚಿನ್ ಜೋಶಿ ( 90.85), ಅಪೂರ್ವ ಹೆಗ್ಡೆ (90.14) ಶೇಕಡವನ್ನು ಪಡೆದಿರುತ್ತಾರೆ.

ಒಟ್ಟಾರೆಯಾಗಿ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳ ಪೈಕಿ ಶೇ 99 ಕ್ಕಿಂತ ಹೆಚ್ಚು 3 ವಿದ್ಯಾರ್ಥಿಗಳು, ಶೇ 95 ಕ್ಕಿಂತ ಹೆಚ್ಚು 10 ವಿದ್ಯಾರ್ಥಿಗಳು, ಶೇ 90ಕ್ಕಿಂತ ಹೆಚ್ಚು 22 ವಿದ್ಯಾರ್ಥಿಗಳು ಮತ್ತು ಶೇ85 ಕ್ಕಿಂತ ಹೆಚ್ಚು 40 ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸುವುದರ ಮೂಲಕ ತಮ್ಮ ಸಾಧನೆಯ ಗರಿಯನ್ನು ಮತ್ತು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ.  ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ಪ್ರಾಚಾರ್ಯರು ಶಿಕ್ಷಕ ವೃಂದದವರು ಅಭಿನಂದಿಸುವುದರೊಂದಿಗೆ ವಿದ್ಯಾರ್ಥಿಗಳ ಸಾಧನೆಗೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.


SHARE THIS UPDATE